Surveying or land surveying is the technique, profession, art and science of determining the terrestrial or three-dimensional positions of points and the distances and angles between them. … Surveying has been an element in the development of the human environment since the beginning of recorded history.
ಮೋಜಣಿಯು (ಸರ್ವೇ) ಭೂಮಿಯ ಅಥವಾ ಮೂರು ಆಯಾಮದ ಬಿಂದುಗಳ ಸ್ಥಾನಗಳನ್ನು ಮತ್ತು ಅವುಗಳ ನಡುವಿನ ದೂರಗಳ ಹಾಗೂ ಕೋನಗಳನ್ನು ನಿರ್ಧರಿಸುವ ತಂತ್ರ, ವೃತ್ತಿ ಮತ್ತು ವಿಜ್ಞಾನ. ಭೂ ಮೋಜಣಿಯ ವೃತ್ತಿಗನನ್ನು ಭೂ ಮೋಜಣಿದಾರ ಎಂದು ಕರೆಯಲಾಗುತ್ತದೆ. ಈ ಬಿಂದುಗಳು ಸಾಮಾನ್ಯವಾಗಿ ಭೂಮಿಯ ಮೇಲ್ಮೈ ಮೇಲೆ ಇರುತ್ತವೆ. ಇವನ್ನು ಹಲವುವೇಳೆ ಒಡೆತನಕ್ಕಾಗಿ ನಕ್ಷೆಗಳು ಹಾಗೂ ಗಡಿರೇಖೆಗಳನ್ನು, ಕಟ್ಟಡದ ಮೂಲೆಗಳು ಅಥವಾ ಮೇಲ್ಮೈ ಕೆಳಗಿನ ವೈಶಿಷ್ಟ್ಯಗಳ ಮೇಲ್ಮೈ ಸ್ಥಳಗಳಂತಹ ಸ್ಥಳಗಳನ್ನು ಸ್ಥಾಪಿಸಲು, ಅಥವಾ ಆಸ್ತಿ ಮಾರಟದಂತಹ ಸರ್ಕಾರಿ ಅಥವಾ ಸಿವಿಲ್ ಕಾನೂನಿಗೆ ಅಗತ್ಯವಿರುವ ಇತರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ.